ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನ

ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನ

 • June 27th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಮರ್ಥ ಭಾರತ ಇವರ ನೇತೃತ್ವದಲ್ಲಿ ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನವನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿ ಶ್ರೀಕೃಷ್ಣನಿಗೆ ಪ್ರೀತಿಕರವಾದ ಈ ಕಾರ್ಯದಲ್ಲಿ ಭಾಗವಹಿಸುವಂತೆ ಕರೆ ನೀಡಿ ಹಸು ಮತ್ತು ಹಸೆ ಕಾಪಾಡುವವರ ಜೀವನ ಹಸನಾಗುವುದು ಎಂದು ಆಶೀರ್ವಚಿಸಿದರು.ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಜಗತ್ತಿನಲ್ಲಿ ಉಸಿರಾಟ ಮಾಡುವವರೆಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಬೇಕೆಂದು ಹರಸಿದರು.ಅತಿಥಿಗಳಾಗಿ ಅದಾನಿ ಗ್ರೂಪ್ಸ್ ನ ಕಿಶೋರ್ ಆಳ್ವ,ಜಿ.ಪ.ಅಧ್ಯಕ್ಷರಾದ ದಿನಕರ್ ಬಾಬು, ಎಂ.ಬಿ.ಪುರಾಣಿಕ್ ಮತ್ತು ಕಾರ್ಯಕ್ರಮದ ಸಂಘಟಕರಾದ ಟಿ.ಶಂಭು ಶೆಟ್ಟಿ ,ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Read More
ಜನ ಔಷಧಿ ಕೇಂದ್ರದ ಉದ್ಘಾಟನಾ ಸಮಾರಂಭ

ಜನ ಔಷಧಿ ಕೇಂದ್ರದ ಉದ್ಘಾಟನಾ ಸಮಾರಂಭ

 • June 25th, 2017

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ - ಭಾರತ ಸರಕಾರದ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯಡಿಯಲ್ಲಿ, ಕರ್ನಾಟಕದಲ್ಲಿ ಪ್ರಥಮವಾಗಿ ಉಡುಪಿಯ ಬಡಗುಪೇಟೆಯಲ್ಲಿ ಪ್ರಾರಂಭಿಸಲಾದ ಮೊದಲ ಜನ ಔಷಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು - ಜನರು ಹಾಗೂ ಸರಕಾರ ಜೊತೆ ಸೇರಿ ಔಷಧದಲ್ಲಿ ಕಲಬೆರಕೆಯಾಗದಂತೆ ಎಚ್ಚರವಹಿಸಿ ಈ ಯೋಜನೆಯು ಯಶಸ್ವಿಯಾಗುವಂತೆ ಸಹಕರಿಸಿ ಎಲ್ಲರಿಗೂ ಇದರ ಉಪಯೋಗ ಸಿಗುವಂತೆ ಆಗಲಿ ಎಂದು ಆಶೀರ್ವಚಿಸಿದರು.ಕೃಷ್ಣಾಪುರ ಶ್ರೀಗಳಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಭೆಯ ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು.

Read More
ರಾಮಕುಂಜೇಶ್ವರ ಹೈಸ್ಕೂಲ್ (ಪುತ್ತೂರು ತಾಲೂಕು )-ವಿದ್ಯಾಥಿಗಳಿಂದ ಯಕ್ಷಗಾನ

ರಾಮಕುಂಜೇಶ್ವರ ಹೈಸ್ಕೂಲ್ (ಪುತ್ತೂರು ತಾಲೂಕು )-ವಿದ್ಯಾಥಿಗಳಿಂದ ಯಕ್ಷಗಾನ

 • June 6th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ, ರಾಮಕುಂಜೇಶ್ವರ ಹೈಸ್ಕೂಲ್ (ಪುತ್ತೂರು ತಾಲೂಕು )ಇದರ ವಿದ್ಯಾಥಿಗಳಿಂದ ಯಕ್ಷಗಾನ ನಡೆಯಿತು

Read More
ಕೊನೆಯ ಸಪ್ತೋತ್ಸವ

ಕೊನೆಯ ಸಪ್ತೋತ್ಸವ

 • June 4th, 2017

04-06-2017ರಂದು ಶ್ರೀ ಕೃಷ್ಣ ಮಠದಲ್ಲಿ ಕೊನೆಯ ಸಪ್ತೋತ್ಸವವು ವಿಜೃಂಭಣೆಯಿಂದ ನಡೆಯಿತು. ತದನಂತರ ಚೂರ್ಣೋತ್ಸವ ನಡೆಯಿತು.

Read More
ಡಾ ನವೀನ್ ಭಟ್ ಸನ್ಮಾನ

ಡಾ ನವೀನ್ ಭಟ್ ಸನ್ಮಾನ

 • June 3rd, 2017

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಐ ಎ ಎಸ್ ಪರೀಕ್ಷೆಯಲ್ಲಿ 37 ನೇ ರಾಯ್‍ಂಕ್ ಪಡೆದ ತರುಣ ಸಾಧಕ ಡಾ ನವೀನ್ ಭಟ್ ಅವರನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಮಾನಿಸಿದರು .

Read More
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

 • June 3rd, 2017

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೈದರಾಬಾದಿನ ಸುಪ್ರಭಾತ ಹೋಟೆಲ್ ಸಮೂಹದ ಮುಖ್ಯಸ್ಥ ,ಕಲಾಪೋಷಕ ,ಧಾರ್ಮಿಕ ಸಾಂಸ್ಕೃತಿಕ ಧುರೀಣ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು .

Read More
ಶ್ರೀ ಚಂದ್ರಶೇಖರ ನರಸಿಂಹ ದಾಸ್ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

ಶ್ರೀ ಚಂದ್ರಶೇಖರ ನರಸಿಂಹ ದಾಸ್ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

 • June 3rd, 2017

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ,ಬಾಗಲಕೋಟೆಯ ಆರಾಧನಾ ಹೋಟೆಲ್ ಸಮೂಹದ ಮಾಲಕ ಧಾರ್ಮಿಕ ಮುಖಂಡ , ದಾನಿ ಶ್ರೀ ಚಂದ್ರಶೇಖರ ನರಸಿಂಹ ದಾಸ್ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Read More
ಎಸ್.ಎ. ಕೃಷ್ಣಯ್ಯ ಇವರಿಗೆ

ಎಸ್.ಎ. ಕೃಷ್ಣಯ್ಯ ಇವರಿಗೆ "ಕಡತ್ತಿಲ ಶ್ರೀ" ಪ್ರಶಸ್ತಿ

 • May 31st, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಎಸ್.ಎ. ಕೃಷ್ಣಯ್ಯ ಇವರಿಗೆ ಹಂಡೆದಾಸ ಪ್ರತಿಷ್ಠಾನ (ರಿ) ಕಾರ್ಕಳ ಇವರಿಂದ ಕೊಡಲ್ಪಟ್ಟ "ಕಡತ್ತಿಲ ಶ್ರೀ" ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರದ ನೀಲಾವರ ಸುರೇಂದ್ರ ಅಡಿಗ, ಉಡುಪಿ ತುಳುಕೂಟದ ಅಧ್ಯಕ್ಷರಾದ ಇಂದ್ರಾಳಿ ಜಯಕಾರ ಶೆಟ್ಟಿ, ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಹಂಡೆ, ಕಾರ್ಯದರ್ಶಿ ಅನಂತಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Read More