ಜುಲೈ ೪..ರಾಜ್ಯ ಗೋಶಾಲೆಗಳ ಒಕ್ಕೂಟ ರಚನಾ ಸಭೆ

ಜುಲೈ ೪..ರಾಜ್ಯ ಗೋಶಾಲೆಗಳ ಒಕ್ಕೂಟ ರಚನಾ ಸಭೆ

  • June 27th, 2016

ಜುಲೈ ೪..ರಾಜ್ಯ ಗೋಶಾಲೆಗಳ ಒಕ್ಕೂಟ ರಚನಾ ಸಭೆ ಗೋವುಗಳ ರಕ್ಷಣೆಗಾಗಿ ಹಾಗೂ ಸಂವರ್ಧನೆಗಾಗಿ ಗೋಶಾಲೆಗಳೆಲ್ಲರೂ ಸಂಘಟಿತರಾಗಿ ಯೋಜನೆ ರೂಪಿಸುವ ಅಗತ್ಯವಿದೆ. ಹಾಗೆಯೇ ಸರಕಾರಗಳೊಡನೆ ವ್ಯವಹರಿಸಲಿಕ್ಕೂ ಒಕ್ಕೂಟದ ಅವಶ್ಯಕತೆಯಿದೆ. ಆದ್ದರಿಂದ ಗೋಶಾಲೆಗಳ ಒಕ್ಕೂಟ ರಚಿಸಲು ಪೇಜಾವರ ಮಠದ ವತಿಯಿಂದ ಉಡುಪಿ ಶ್ರೀ ಕೃಷ್ಣ ಮಠದ ಅನ್ನಬ್ರಹ್ಮ ಸಭಾಂಗಣದಲ್ಲಿ ದಿ. 04-07-2016 ರ ಸೋಮವಾರ ಬೆಳ್ಳಿಗ್ಗೆ ಘ. 9:30 ಇಂದ ಸಂಜೆ 5:30 ವರೆಗೆ ಗೋಶಾಲೆಯ ಪ್ರಮುಖರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಬರುವೆ ಗೋಶಾಲಾ ಪ್ರಮುಖರು ದೂರವಾಣಿ ಸಂಖ್ಯೆ 9343351400 ಕ್ಕೆ ತಿಳಿಸಬೇಕಾಗಿ ಪೇಜಾವರ ಮಠದ ವಕ್ತಾರರು ಪತ್ರಿಕಾ ಪ್ರಕಟಣೆಯನ್ನು ತಿಳಿಸಿರುತ್ತಾರೆ. ಸಂಪಾದಕರಲ್ಲಿ ವಿನಂತಿ: ಇದು ರಾಜ್ಯ ಮಟ್ಟದ ವಿಚಾರವಾದುದರಿಂದ "ರಾಜ್ಯ ಸುದ್ದಿ"( . . )ಯಲ್ಲಿ ಪ್ರಕಟಿಸಬೇಕಾಗಿ ವಿನಮ್ರ ವಿನಂತಿ.

Read More
ಹಿರಿಯಡ್ಕ:ಪರ್ಯಾಯ ದ ಯಶಸ್ಸಿಗೆ ಉತ್ಸಾಹದ ಸಿದ್ಧತೆ

ಹಿರಿಯಡ್ಕ:ಪರ್ಯಾಯ ದ ಯಶಸ್ಸಿಗೆ ಉತ್ಸಾಹದ ಸಿದ್ಧತೆ

  • November 18th, 2015

ಪೇಜಾವರ ಪಂಚಮ ಪರ್ಯಾಯೋತ್ಸವದ ಬಗ್ಗೆ ಹಿರಿಯಡ್ಕ,ಪೆರ್ಡೂರು ಭಾಗದ ನಾಗರಿಕರು,ಭಕ್ತರ ಸಮಾಲೋಚನಾ ಸಭೆ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆಯಿತು

Read More