timeline_pre_loader
Timeline Of Pejavara Paryaya 2015-2016

Today's Program

Sri Krishna Pooja  | June 28th, 2017

Mahapooja

Sri Krishna Pooja  | June 28th, 2017

Today's Program

Sri Krishna Pooja  | June 27th, 2017

Alankara ( ನವರತ್ನ ಕವಚ ಅಲಂಕಾರ )

June 27th, 2017  | Sri Krishna Pooja

Mahapooja

Sri Krishna Pooja  | June 27th, 2017

ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನ

June 27th, 2017  | News & Events

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಮರ್ಥ ಭಾರತ ಇವರ ನೇತೃತ್ವದಲ್ಲಿ ಪರಿಸರ ಉಳಿಸಿ- ಬೆಳೆಸುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನವನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿ ಶ್ರೀಕೃಷ್ಣನಿಗೆ ಪ್ರೀತಿಕರವಾದ ಈ ಕಾರ್ಯದಲ್ಲಿ ಭಾಗವಹಿಸುವಂತೆ ಕರೆ ನೀಡಿ ಹಸು ಮತ್ತು ಹಸೆ ಕಾಪಾಡುವವರ ಜೀವನ ಹಸನಾಗುವುದು ಎಂದು ಆಶೀರ್ವಚಿಸಿದರು.ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಜಗತ್ತಿನಲ್ಲಿ ಉಸಿರಾಟ ಮಾಡುವವರೆಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಬೇಕೆಂದು ಹರಸಿದರು.ಅತಿಥಿಗಳಾಗಿ ಅದಾನಿ ಗ್ರೂಪ್ಸ್ ನ ಕಿಶೋರ್ ಆಳ್ವ,ಜಿ.ಪ.ಅಧ್ಯಕ್ಷರಾದ ದಿನಕರ್ ಬಾಬು, ಎಂ.ಬಿ.ಪುರಾಣಿಕ್ ಮತ್ತು ಕಾರ್ಯಕ್ರಮದ ಸಂಘಟಕರಾದ ಟಿ.ಶಂಭು ಶೆಟ್ಟಿ ,ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಡಾ.ರಾಜಶ್ರೀ ವಾರಿಯರ್ ಇವರಿಂದ "ಭಾರತನೃತ್ಯವೈಭವ"

Daily Events & Cultural Program  | June 27th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ , ನೃತ್ಯ ನಿಕೇತನ ಕೊಡವೂರು ಇದರ ರಜತ ಮಹೋತ್ಸವದ ಪ್ರಯುಕ್ತ ನಡೆದ ರಜತಪಥ ಕಾರ್ಯಕ್ರಮದಲ್ಲಿ ಡಾ.ರಾಜಶ್ರೀ ವಾರಿಯರ್ ಇವರಿಂದ "ಭಾರತನೃತ್ಯವೈಭವ" ಭರತನಾಟ್ಯ ನಡೆಯಿತು.

Today's Program

June 26th, 2017  | Sri Krishna Pooja

Alankara ( ವಜ್ರಕವಚ ಅಲಂಕಾರ )

Sri Krishna Pooja  | June 26th, 2017

Mahapooja

June 26th, 2017  | Sri Krishna Pooja

ಅದಿತಿ ಪ್ರಹ್ಲಾದ್, ಬೆಂಗಳೂರು - ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

Daily Events & Cultural Program  | June 26th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅದಿತಿ ಪ್ರಹ್ಲಾದ್, ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

Today's Program

June 25th, 2017  | Sri Krishna Pooja

Mahapooja

June 25th, 2017  | Sri Krishna Pooja

ಅನಂತಕೃಷ್ಣ ಬರೆಪಾಡಿ ಮತ್ತು ಬಳಗ ಪುತ್ತೂರು ಇವರಿಂದ 'ವಾಲಿ ಸುಗ್ರೀವ ' ಎಂಬ ಯಕ್ಷಗಾನ ತಾಳಮದ್ದಳೆ

Daily Events & Cultural Program  | June 25th, 2017

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅನಂತಕೃಷ್ಣ ಬರೆಪಾಡಿ ಮತ್ತು ಬಳಗ ಪುತ್ತೂರು ಇವರಿಂದ 'ವಾಲಿ ಸುಗ್ರೀವ ' ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ಕುಟುಂಬ ಸಮೇತ ಭೇಟಿ

June 25th, 2017  | Dignitaries Visit

ಶ್ರೀ ಕೃಷ್ಣ ಮಠಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ಕುಟುಂಬ ಸಮೇತ ಭೇಟಿ ನೀಡಿ ಶ್ರೀ ಕೃಷ್ಣ ದೇವರ ದರ್ಶನ ಮಾಡಿದರು. ನಂತರ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಕ್ಷತೆ ಸ್ವೀಕರಿಸಿದರು.

ಜನ ಔಷಧಿ ಕೇಂದ್ರದ ಉದ್ಘಾಟನಾ ಸಮಾರಂಭ

News & Events  | June 25th, 2017

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ - ಭಾರತ ಸರಕಾರದ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯಡಿಯಲ್ಲಿ, ಕರ್ನಾಟಕದಲ್ಲಿ ಪ್ರಥಮವಾಗಿ ಉಡುಪಿಯ ಬಡಗುಪೇಟೆಯಲ್ಲಿ ಪ್ರಾರಂಭಿಸಲಾದ ಮೊದಲ ಜನ ಔಷಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು - ಜನರು ಹಾಗೂ ಸರಕಾರ ಜೊತೆ ಸೇರಿ ಔಷಧದಲ್ಲಿ ಕಲಬೆರಕೆಯಾಗದಂತೆ ಎಚ್ಚರವಹಿಸಿ ಈ ಯೋಜನೆಯು ಯಶಸ್ವಿಯಾಗುವಂತೆ ಸಹಕರಿಸಿ ಎಲ್ಲರಿಗೂ ಇದರ ಉಪಯೋಗ ಸಿಗುವಂತೆ ಆಗಲಿ ಎಂದು ಆಶೀರ್ವಚಿಸಿದರು.ಕೃಷ್ಣಾಪುರ ಶ್ರೀಗಳಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಭೆಯ ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು.

Today's Program

June 24th, 2017  | Sri Krishna Pooja

Mahapooja

June 24th, 2017  | Sri Krishna Pooja

ಮುಸ್ಲಿಂ ಗುರುಗಳು ಹಾಗೂ ಬಾಂಧವರೊಂದಿಗೆ ಸೌಹಾರ್ದ ಕೂಟ

Daily Events & Cultural Program  | June 24th, 2017

ಶ್ರೀ ಕೃಷ್ಣ ಮಠದ ಅನ್ನಬ್ರಹ್ಮದಲ್ಲಿ ರಂಜಾನ್ ಹಬ್ಬದ ಉಪವಾಸದ ಕೊನೆಯ ದಿನದಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಉಡುಪಿಯ ಮುಸ್ಲಿಂ ಗುರುಗಳು ಹಾಗೂ ಬಾಂಧವರೊಂದಿಗೆ ಸೌಹಾರ್ದ ಕೂಟದಲ್ಲಿ ಪರ್ಯಾಯ ಶ್ರೀಗಳವರು ನಾಡಿನ ಎಲ್ಲ ಜನತೆ ಪರಸ್ಪರ ಸೌಹಾರ್ದದೊಂದಿಗೆ ಶಾಂತಿಯಿಂದ ಬಾಳಬೇಕೆಂದು ತಿಳಿಸಿ ಫಲಗಳನ್ನು ನೀಡಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ರಹೀಮ್ ಉಚ್ಚಿಲ ಹಾಗೂ ಪ್ರಸಕ್ತ ಅಧ್ಯಕ್ಷರಾದ ಎಂ.ಎ.ಗಫುರ್, ಗುರ್ಮೆ ಸುರೇಶ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸುಂದೋಪಸುಂದ ಕಾಳಗ- ತೆಂಕುತಿಟ್ಟಿನ ಹೆಸರಾಂತ ಕಲಾವಿದರಿಂದ ಯಕ್ಷಗಾನ

June 24th, 2017  | Daily Events & Cultural Program

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಹೆಸರಾಂತ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಪ್ರಸಂಗ: ಸುಂದೋಪಸುಂದ ಕಾಳಗ ಹಿಮ್ಮೇಳದಲ್ಲಿ: ಪುತ್ತಿಗೆ ರಘುರಾಮ್ ಹೊಳ್ಳ ಮತ್ತು ಬಳಗ. ಮುಮ್ಮೇಳದಲ್ಲಿ: ದಿವಾಕರ ರೈ , ಸಂಪಾಜೆ , ಚಂದ್ರಶೇಖರ್, ಧರ್ಮಸ್ಥಳ, ಸಂತೋಷ್, ಹಿಲಿಯಾನಾ, ಸೀತಾರಾಮ್ ಕುಮಾರ್ ( ಹಾಸ್ಯ ), ವಿಷ್ಣುಶರ್ಮ ಹಾಗು ಮತ್ತಿತರರು.

Today's Program

Sri Krishna Pooja  | June 23rd, 2017

Mahapooja

Sri Krishna Pooja  | June 23rd, 2017

ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದ ಬಿ.ಎಸ್.ಯೆಡಿಯೂರಪ್ಪ ಭೇಟಿ

June 23rd, 2017  | Dignitaries Visit

ಶ್ರೀ ಕೃಷ್ಣ ಮಠಕ್ಕೆ ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದ ಬಿ.ಎಸ್.ಯೆಡಿಯೂರಪ್ಪ ನವರು ಭೇಟಿ ನೀಡಿ ಶ್ರೀ ಕೃಷ್ಣ ದೇವರ ದರ್ಶನ ಮಾಡಿದರು. ನಂತರ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಕ್ಷತೆ ಸ್ವೀಕರಿಸಿದರು.

ಶ್ರೀ ಎಸ್ ಶ್ರೀಧರ್ ರಾವ್ , ಬೆಂಗಳೂರು - ದಾಸವಾಣಿ ಕಾರ್ಯಕ್ರಮ

Daily Events & Cultural Program  | June 23rd, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಎಸ್ ಶ್ರೀಧರ್ ರಾವ್ , ಬೆಂಗಳೂರು ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

Today's Program

June 22nd, 2017  | Sri Krishna Pooja