ಕಾಪುವಿನಲ್ಲಿ ಪರ್ಯಾಯ ಪೂರ್ವಭಾವಿ ಸಭೆ

ಪೇಜಾವರ ಶ್ರೀಗಳ ಪರ್ಯಾಯೋತ್ಸವದ ಬಗ್ಗೆಪೂರ್ವಭಾವಿ ಸಮಾಲೋಚನಾ ಸಭೆ

ಪೇಜಾವರ ಶ್ರೀಗಳ ಪರ್ಯಾಯೋತ್ಸವದ ಬಗ್ಗೆಪೂರ್ವಭಾವಿ ಸಮಾಲೋಚನಾ ಸಭೆಯು ನವೆಂಬರ್ 7ರಂದು ಶನಿವಾರ ಸಂಜೆ 6.15ಕ್ಕೆ ಕಾಪು ಲಕ್ಷ್ಮೀಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‍ಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಶಾಸಕ ಲಾಲಾಜಿ ಮೆಂಡನ್, ಮುಖಂಡರುಗಳಾದ ಕಾಪು ದಿವಾಕರ ಶೆಟ್ಟಿ, ವಾಸುದೇವ ಶೆಟ್ಟಿ, ಕೇಂಜ ಶ್ರೀಧರ ತಂತ್ರಿ, ರಮೇಶ್ ಹೆಗ್ಡೆ, ಕೆ. ಪಿ. ಆಚಾರ್ಯ, ಕೆ. ಸುರೇಶ್ ನಾಯಕ್, ಎರ್ಮಾಳು ಮಾಧವ ಸುವರ್ಣ, ಪ್ರಕಾಶ್ ಶೆಟ್ಟಿ ಪಡುಬಿದ್ರಿ, ಎರ್ಮಾಳು ಶಶಿಧರ ಶೆಟ್ಟಿ, ಶೀಲಾ ಶೆಟ್ಟಿ, ಸರಸು ಡಿ. ಬಂಗೇರ ಸೇರಿದಂತೆ ಕಾಪು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ, ಸಾಮಾಜಿಕ ಧುರೀಣರು, ಭಜನಾ ಸಂಘಗಳ ಪ್ರತಿನಿಧಿಗಳು ಭಾಗವಹಿಸಲಿರುವರು. ಪರ್ಯಾತೋತ್ಸವ ಸಮಿತಿ ಅಧ್ಯಕ್ಷ ಭುವನೇಂದ್ರ ಕಿದಿಯೂರು, ಮಠದ ದಿವಾನರಾದ ರಘುರಾಮಾಚಾರ್, ಪ್ರಧಾನ ಕಾರ್ಯದರ್ಶಿ ಹೆರಂಜೆ ಕೃಷ್ಣ ಭಟ್, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಯಶ್‍ಪಾಲ್ ಸುವರ್ಣ, ದುಗ್ಗೇಗೌಡ ಮೊದಲಾದವರು ಉಪಸ್ಥಿತರಿರುವರು.

ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.