ಕಾರ್ಕಳದಲ್ಲಿ ಪೇಜಾವರ ಪರ್ಯಾಯ ಸಮಾಲೋಚನಾ ಸಭೆ

ಕಾರ್ಕಳದಲ್ಲಿ ಪೇಜಾವರ ಪರ್ಯಾಯ ಸಮಾಲೋಚನಾ ಸಭೆ

ಕಾರ್ಕಳ ತಾಲೂಕಿನಲ್ಲಿ ಪೇಜಾವರ ಶ್ರೀಗಳ ಪಂಚಮ ಪರ್ಯಾಯೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ

ತಾ: 13-11-2015

ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಮಹೋತ್ಸವದ ಕಾರ್ಕಳ ತಾಲೂಕು ನಾಗರಿಕರು ಭಕ್ತರ ಪೂರ್ವಭಾವಿ ಸಮಾಲೋಚನಾ ಸಭೆಯು ಕಾರ್ಕಳ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭುವನೇಂದ್ರ ಕಿದಿಯೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಪ್ರ.ಕಾರ್ಯದರ್ಶಿ ಹೆರಂಜೆ ಕೃಷ್ಣಭಟ್, ಮಠದ ದಿವಾನರು ರಘುರಾಮಾಚಾರ್ಯ, ಕಾರ್ಕಳ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ಶೆಣೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಹರೀಶ್  ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದು ಸಮಾಲೋಚನೆ ನಡೆಸಿದರು. ಧಾರ್ಮಿಕ, ಸಾಮಾಜಿಕ ಮುಖಂಡ ಭಾಸ್ಕರ್ ಕೋಟ್ಯಾನ್ ಇರ್ವತ್ತೂರು ಅವರನ್ನು ಕಾರ್ಕಳ ತಾಲೂಕು ಹೊರೆಕಾಣಿಕೆ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪ್ರಮೀಳಾ ಉಪಾಧ್ಯಾಯ, ರಾಘವೇಂದ್ರ ಮಠದ ಆಡಳಿತ ಮಂಡಳಿ ಸದಸ್ಯ ಶ್ರೀನಿವಾಸ ಆಚಾರ್ಯ ಶಿವಪುರ ಗ್ರಾ.ಪಂ .ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಪಾರ್ಶ್ವ ನಾರ್ವೆ ಚರ್ಮ ರಾಮಚಂದ್ರ ಉಪಾಧ್ಯಾಯ, ಎಸ್ ವಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ವಾಸುದೇವ ಭಟ್ ನಿರೂಪಿಸಿದರು.

Meeting - ಕಾರ್ಕಳದಲ್ಲಿ ಪೇಜಾವರ ಪರ್ಯಾಯ ಸಮಾಲೋಚನಾ ಸಭೆ