ಹಿರಿಯಡ್ಕ:ಪರ್ಯಾಯ ದ ಯಶಸ್ಸಿಗೆ ಉತ್ಸಾಹದ ಸಿದ್ಧತೆ

ಹಿರಿಯಡ್ಕ:ಪರ್ಯಾಯ ದ ಯಶಸ್ಸಿಗೆ ಉತ್ಸಾಹದ ಸಿದ್ಧತೆ

ಪೇಜಾವರ ಪಂಚಮ ಪರ್ಯಾಯೋತ್ಸವದ ಬಗ್ಗೆ ಹಿರಿಯಡ್ಕ,ಪೆರ್ಡೂರು ಭಾಗದ ನಾಗರಿಕರು,ಭಕ್ತರ ಸಮಾಲೋಚನಾ ಸಭೆ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆಯಿತು

ತಾ: 18-11-2015

.ಪೇಜಾವರ ಪಂಚಮ ಪರ್ಯಾಯೋತ್ಸವದ ಬಗ್ಗೆ ಹಿರಿಯಡ್ಕ, ಪೆರ್ಡೂರು ಭಾಗದ ನಾಗರಿಕರು, ಭಕ್ತರ ಸಮಾಲೋಚನಾ ಸಭೆ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದು, ಪರ್ಯಾಯದ ಯಶಸ್ಸಿಗೆ ಸಹಕರಿಸುವ ಅತ್ಯಂತ ಉತ್ಸಾಹದ ಸ್ಪಂದನೆಯ ವ್ಯಕ್ತವಾಯಿತು. ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಸ್ ಹೆಗ್ಡೆಯವರ ಅಧ್ಯಕ್ಷತೆ, ಆಡಳಿತ ಮೊಕ್ತೇಸರ ಉದ್ಯಮಿ ನಟರಾಜ ಹೆಗ್ಡೆಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಡುಪಿ ತಾ.ಪಂ. ಅಧ್ಯಕ್ಷರು ಸುನೀತಾ ಕಾಯ್ಲ್, ಹಿರಿಯಡ್ಕ ಗ್ರಾ.ಪಂ. ಅಧ್ಯಕ್ಷರು ಮಾಲತಿ ಆಚಾರ್ಯ, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಬಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಸಾಮಾಜಿಕ ಮುಖಂಡರುಗಳಾದ ವಿನೋದಗಳಲ್ಲಿ ಕುಮಾರ್ ಅಮರನಾಥ್ ಹೆಗ್ಡೆ, ಉಮೇಶ್ ಶೆಟ್ಟಿ, ಶೇಖರ ಶೆಟ್ಟಿ, ಶೇಖರ ಪೂಜಾರಿ, ಬಾಲಗಂಗಾಧರ ರಾವ್, ಅರ್ಚಕ ನಾರಾಯಣ ಅಡಿಗ ಸೇರಿದಂತೆ ಅನೇಕ ಮಹನೀಯರು ಉಪಸ್ಥಿತರಿದ್ದು ಸಮಾಲೋಚನೆ ನಡೆಸಲಾಯಿತು. ಪರ್ಯಾಯ ಸ್ವಾಗತ ಸಮಿತಿಯ ಭುವನೇಂದ್ರ ಕಿದಿಯೂರು, ಹೆರಂಜೆ ಕೃಷ್ಣ ಭಟ್, ದುಗ್ಗೇಗೌಡ, ಆಶಾ, ಸುಬ್ರಹ್ಮಣ್ಯ ಭಟ್, ಎಸ್ ವಿ ಭಟ್, ಮುರಳಿಕಡೆಕಾರ್ ಅಜಿತ್ ಹೆಗ್ಡೆ, ಯಶ್ ಪಾಲ್ ಸುವರ್ಣ, ಮೊದಲಾದವರು ಈ ತನಕ ನಡೆದ ಸಿದ್ಧತೆಗಳನ್ನು ವಿವರಿಸಿದರು. ಈ ಹಿಂದಿಗಿಂತಲೂ ಉತ್ತಮ ರೀತಿಯಲ್ಲಿ ನಾಗರಿಕರ ಸಹಕಾರದಿಂದ ಹೊರೆಕಾಣಿಕೆಯನ್ನು ಸಂಗ್ರಹಿಸಿ ಅರ್ಪಿಸುವುದಾಗಿ ನಟರಾಜ ಹೆಗ್ಡೆತಿಳಿಸಿದರು. ಆ ಭಾಗದ ಹೊರೆಕಾಣಿಕೆ ಸಮಿತಿ ರಚಿಸಿ ಧಾರ್ಮಿಕ ಮುಖಂಡ, ಹಿರಿಯರಾದ ವಿಶ್ವನಾಥ ರೈಯವರನ್ನು ಅಧ್ಯಕ್ಷರಾಗಿ ಘೋಷಿಸಲಾಯಿತು. ಸಮಿತಿ ಕಾರ್ಯದರ್ಶಿ ವಾಸುದೇವ ಭಟ್ ನಿರೂಪಿಸಿದರು.