ಪೇಜಾವರ ಪರ್ಯಾಯೋತ್ಸವದ ಕುರಿತಾಗಿ ಉಡುಪಿಯ ಬ್ರಾಹ್ಮಣ ಸಂಘಗಳ ಸಮಾಲೋಚನಾ ಸಭೆ

ಪೇಜಾವರ ಪರ್ಯಾಯೋತ್ಸವದ ಕುರಿತಾಗಿ ಉಡುಪಿಯ ಬ್ರಾಹ್ಮಣ ಸಂಘಗಳ ಸಮಾಲೋಚನಾ ಸಭೆ

ಪೇಜಾವರ ಪರ್ಯಾಯೋತ್ಸವದ ಕುರಿತಾಗಿ ಉಡುಪಿಯ ಬ್ರಾಹ್ಮಣ ಸಂಘಗಳ ಸಮಾಲೋಚನಾ ಸಭೆ ಸೋಮವಾರ ಪೇಜಾವರ ಮಠದಲ್ಲಿ ನಡೆಯಿತು.

07 Dec 2015,

ಪರ್ಯಾಯ ಸಿದ್ಧತೆ


ಬ್ರಾಹ್ಮಣ ಸಂಘಗಳ ಸಭೆ : ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಜುನಾಥ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪೇಜಾವರ ಶ್ರೀಗಳು ದೇಶಾದ್ಯಂತ ಸಂಚರಿಸಿ ಅಸಾಮಾನ್ಯ ಸಾಧನೆ ಮಾಡಿರುವುದು ಸಮಸ್ತ ಉಡುಪಿಗೆ ಅದರಲ್ಲೂ ಬ್ರಾಹ್ಮಣ ಸಮಾಜಕ್ಕೆ ಬಹಳ ಹೆಮ್ಮೆಯ ವಿಚಾರ. ಆದ್ದರಿಂದ ಹಿಂದಿನ ಎಲ್ಲಾ ಮಠಗಳು ಪರ್ಯಾದಂತೆ ಮತ್ತು ಅದಕ್ಕಿಂತ ಉತ್ತಮ ರೀತಿಯಲ್ಲಿ ಉಡುಪಿಯ ಸಮಸ್ತ ಬ್ರಾಹ್ಮಣ ಸಮಾಜ ಪರ್ಯಾಯದ ಯಶಸ್ಸಿಗಾಗ ಪೂರ್ಣರೂಪದಲ್ಲಿ ಸಹಕರಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಯುವಬ್ರಾಹ್ಮಣ ಪರಿಷತ್ತು, ಹವ್ಯಕ ಬ್ರಾಹ್ಮಣ ಸಭಾ, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘದ ನೂರಾರು ಸದಸ್ಯರು, ಮಹಿಳೆಯರು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಲಕ್ಷ್ಮೀನಾರಾಯಣ ತಂತ್ರಿ, ಕಬಿಯಾಡಿ ಜಯರಾಮ ಆಚಾರ್ಯ, ರತ್ನಕುಮಾರ್, ರಘುರಾಮಾಚಾರ್ಯ ಪದ್ಮನಾಭ ಭಟ್, ರಾಮಚಂದ್ರ ಉಪಾಧ್ಯಾಯ, ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.

 

Meeting - ಪೇಜಾವರ ಪರ್ಯಾಯೋತ್ಸವದ ಕುರಿತಾಗಿ ಉಡುಪಿಯ ಬ್ರಾಹ್ಮಣ ಸಂಘಗಳ ಸಮಾಲೋಚನಾ ಸಭೆ
Meeting - ಪೇಜಾವರ ಪರ್ಯಾಯೋತ್ಸವದ ಕುರಿತಾಗಿ ಉಡುಪಿಯ ಬ್ರಾಹ್ಮಣ ಸಂಘಗಳ ಸಮಾಲೋಚನಾ ಸಭೆ