ಪರ್ಯಾಯ ಆರೋಗ್ಯ ಸಮಿತಿ ಸಭೆ

ಪರ್ಯಾಯ ಆರೋಗ್ಯ ಸಮಿತಿ ಸಭೆ

ಪೇಜಾವರ ಪರ್ಯಾಯೋತ್ಸವದ ಆರೋಗ್ಯ ಸಮಿತಿ ಪೂರ್ವಭಾವಿ ಸಮಿತಿ ಸಭೆಯು ಶುಕ್ರವಾರ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆಯಿತು


ಪರ್ಯಾಯ ಆರೋಗ್ಯ ಸಮಿತಿ ಸಭೆ : ಪೇಜಾವರ ಪರ್ಯಾಯೋತ್ಸವದ ಆರೋಗ್ಯ ಸಮಿತಿ ಪೂರ್ವಭಾವಿ ಸಮಿತಿ ಸಭೆಯು ಶುಕ್ರವಾರ ಸ್ವಾಗತ ಸಮಿತಿ ಕಾರ್ಯಾಲಯದಲ್ಲಿ ನಡೆಯಿತು. ಆದರ್ಶ್ ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ "ಪರ್ಯಾಯೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವುದು ಅತೀಅಗತ್ಯ". ಈ ಬಗ್ಗೆ ನಮ್ಮ ಆಸ್ಪತ್ರೆಯಿಂದ ಉತ್ಸವದ ಸಂದರ್ಭದಲ್ಲಿ ಯಾವುದೇ ತುರ್ತು ಸೇವೆಯನ್ನು ಆದ್ಯತೆ ವಹಿಸಿ, ಒದಗಿಸಲಾಗುವುದು. ಉಡುಪಿ ವೈದ್ಯಕೀಯ ಸಂಘ, ಮೆಡಿಕಲ್ ರೆಪ್ ಸಂಘ, ಸಹಯೋಗದಿಂದ, ಆರೋಗ್ಯ ಇಲಾಖೆಯ ಸಹಕಾರವನ್ನು ಪಡೆದು, ಉಚಿತ ಅಂಬುಲೆನ್ಸ್ ಸೇವೆ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ಆರೋಗ್ಯ ಜಾಗೃತಿ ಮಾಹಿತಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ಡಾ. ಮಾಧವ ಭಟ್, ಡಾ. ವಾಸುದೇವ, ಡಾ. ಕೃಷ್ಣಪ್ರಸಾದ್, ಡಾ. ಜಯಪ್ರಕಾಶ್, ಡಾ. ಹರಿಶ್ಚಂದ್ರ, ಡಾ. ವಿರೂಪಾಕ್ಷ, ಡಾ. ವಿಜಯೇಂದ್ರ ರಾವ್, ಡಾ. ಹೇಮಚಂದ್ರ ಹೊಳ್ಳ, ಡಾ. ಎನ್ ಜಿ ಕೆ ಶರ್ಮ, ಡಾ. ವಿನಾಯಕ ಶೆಣೈ, ಡಾ. ವಾಸುದೇವ ಉಪಾಧ್ಯಾಯ ಸೇರಿದಂತೆ ನಲ್ವತ್ತಕ್ಕೂ ಅಧಿಕ ವೈದ್ಯರು ನಾಗರಿಕ ಆರೋಗ್ಯ ವೇದಿಕೆಯ ಮಧುಸೂದನ ಹೇರೂರು ಮೊದಲಾದವರು ಉಪಸ್ಥಿತರಿದ್ದರು. ಪರ್ಯಾಯ ಸಮಿತಿ ಕಾರ್ಯಾಧ್ಯಕ್ಷ. ಭುವನೇಂದ್ರ ಕಿದಿಯೂರು, ಪ್ರ. ಕಾರ್ಯದರ್ಶಿ ರತ್ನಕುಮಾರ್, ಮುರಳಿ ಕಡೆಕಾರ್, ಡಾ.ರವಿಚಂದ್ರ ಉಚ್ಚಿಲ, ಪ್ರದೀಪ್ ಮೊದಲಾದವರು ಸಹಕರಿಸಿದರು.

Meeting - ಪರ್ಯಾಯ ಆರೋಗ್ಯ ಸಮಿತಿ ಸಭೆ
Meeting - ಪರ್ಯಾಯ ಆರೋಗ್ಯ ಸಮಿತಿ ಸಭೆ