ಹಾಲುಮತ ಮಹಾಸಭಾ (ರಿ)ಉಡುಪಿ -ರಾಜ್ಯ ಮಟ್ಟದ ಕನಕದಾಸರ ಜಯಂತೋತ್ಸವ ಸಮಾರಂಭ

ಹಾಲುಮತ ಮಹಾಸಭಾ (ರಿ)ಉಡುಪಿ -ರಾಜ್ಯ ಮಟ್ಟದ ಕನಕದಾಸರ ಜಯಂತೋತ್ಸವ ಸಮಾರಂಭ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಹಾಲುಮತ ಮಹಾಸಭಾ (ರಿ)ಉಡುಪಿ ಇವರ ರಾಜ್ಯ ಮಟ್ಟದ ಐತಿಹಾಸಿಕ ಕನಕದಾಸರ ಜಯಂತೋತ್ಸವ ಸಮಾರಂಭವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳೊಂದಿಗೆ ಉದ್ಘಾಟನೆ ಮಾಡಿ ಶ್ರೀ ಕೃಷ್ಣನು ಮಹಾಭಾರತ ಯುದ್ಧದ ಮುಂಚೆ ಸಂಧಾನಕ್ಕೆಂದು ಹಸ್ತಿನಾವತಿಗೆ ಹೋದಾಗ ರಾಜ ಅಥವಾ ಮಂತ್ರಿಗಳ ಮನೆಗೆ ಹೋಗದೆ ಏನೂ ಇಲ್ಲದ ವಿದುರನ ಮನೆಗೆ ಊಟಕ್ಕೆ ತೆರಳಿದಂತೆ,ಉಡುಪಿಯ ಕೃಷ್ಣ ಎಲ್ಲ ಭಕ್ತರ ದೇವರು ಎಂದು ತಿಳಿಸಿ ಅನುಗ್ರಹ ಸಂದೇಶ ನೀಡಿದರು.ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರು ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ಕಂಬಳಿ ಮತ್ತು ಹಾರ ಹಾಕಿ ಗೌರವಿಸಿದರು. ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಭಾಧ್ಯಕ್ಷತೆ ವಹಿಸಿದ್ದರು,ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಮತ್ತಿತರರು ಅಭ್ಯಾಗತರಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.

 - ಹಾಲುಮತ ಮಹಾಸಭಾ (ರಿ)ಉಡುಪಿ -ರಾಜ್ಯ ಮಟ್ಟದ ಕನಕದಾಸರ ಜಯಂತೋತ್ಸವ ಸಮಾರಂಭ
 - ಹಾಲುಮತ ಮಹಾಸಭಾ (ರಿ)ಉಡುಪಿ -ರಾಜ್ಯ ಮಟ್ಟದ ಕನಕದಾಸರ ಜಯಂತೋತ್ಸವ ಸಮಾರಂಭ
 - ಹಾಲುಮತ ಮಹಾಸಭಾ (ರಿ)ಉಡುಪಿ -ರಾಜ್ಯ ಮಟ್ಟದ ಕನಕದಾಸರ ಜಯಂತೋತ್ಸವ ಸಮಾರಂಭ