ಆಚಾರ ವಿಚಾರ ಪತ್ರಿಕೆಯ ವಿಂಶತಿ ವಿಚಾರ ಸಂಕಿರಣ

ಆಚಾರ ವಿಚಾರ ಪತ್ರಿಕೆಯ ವಿಂಶತಿ ವಿಚಾರ ಸಂಕಿರಣ

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ, ಆಚಾರ ವಿಚಾರ ಪತ್ರಿಕೆಯ ವಿಂಶತಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಈ ಸಭೆಯಲ್ಲಿ ಪರ್ಯಾಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಾನಸ ಸರೋವರದ ಶುದ್ಧ ನೀರಿನಲ್ಲಿ ಹಂಸಗಳಿರುವಂತೆ ಮಾಧ್ಯಮ ಸಾಹಿತ್ಯವು ಬೆಳೆಯಬೇಕು.ನಾವು ಪಡೆದುಕೊಂಡ ದೇಹವು ತಾತ್ಕಾಲಿಕವಾಗಿರುತ್ತದೆ ಆದರೆ ಈ ದೇಹದಿಂದ ಮಾಡುವ ಉತ್ತಮ ಸಾಧನೆ ಶಾಶ್ವತವಾಗಿದ್ದು ಜನ್ಮಾಂತರದಲ್ಲೂ ಇದರ ಫಲ ಸಿಗುತ್ತದೆ. ಈ ಪತ್ರಿಕೆಯು ಭಗವಂತನ ಬಗ್ಗೆ, ಆಚಾರ ವಿಚಾರಗಳ ಬಗ್ಗೆ , ಧಾರ್ಮಿಕ ವಿಚಾರಗಳ ಬಗ್ಗೆ ತಿಳಿಸುವುದರಿಂದ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು. ನಾಡಿನ ಅನೇಕ ವಿದ್ವಾಂಸರ ಲೇಖನಗಳನ್ನೊಳಗೊಂಡ ಈ ಪತ್ರಿಕೆ ನಿರಂತರವಾಗಿ ಪ್ರಕಟವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಡಾ.ಸುರೇಶ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಡಾ. ವ್ಯಾಸನಕೆರೆ ಪ್ರಭಂಜನ ಆಚಾರ್ಯ, ಪ್ರೊ. ಹರಿದಾಸ ಆಚಾರ್ಯ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

 - ಆಚಾರ ವಿಚಾರ ಪತ್ರಿಕೆಯ ವಿಂಶತಿ ವಿಚಾರ ಸಂಕಿರಣ
 - ಆಚಾರ ವಿಚಾರ ಪತ್ರಿಕೆಯ ವಿಂಶತಿ ವಿಚಾರ ಸಂಕಿರಣ