ವಿಷ್ಣು ಸಹಸ್ರನಾಮ ಪಾರಾಯಣ

ವಿಷ್ಣು ಸಹಸ್ರನಾಮ ಪಾರಾಯಣ

ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮತ್ತು ತಾಲೂಕು ಬ್ರಾಹ್ಮಣ ಸಭಾದವರು ಆಯೋಜಿಸಿರುವ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣವು ಮಧ್ವ ಮಂಟಪದಲ್ಲಿ ಬೆಳಿಗ್ಗೆ 8 ಗಂಟೆಯಿಂದ 10.30 ಗಂಟೆಯವರೆಗೆ ನಡೆಯಿತು. ಪರ್ಯಾಯ ಶಿ ವಿಶ್ವೇಶ ತೀರ್ಥ ಸ್ವಾಮೀಜಿಯವರು, ಮಹಾಭಾರತವು ಗ್ರಂಥವು ಭಗವದ್ಗೀತೆ ಹಾಗೂ ಭಗವಂತನ ಸಹಸ್ರನಾಮಗಳನ್ನು ಜಗತ್ತಿಗೆ ನೀಡುವ ಮೂಲಕ ಉತ್ತಮ ಸಂದೇಶ ಕೊಟ್ಟಿದೆ. ಸಾಮೂಹಿಕ ಪಾರಾಯಣ ಸೇವೆಯನ್ನು ಕೃಷ್ಣನು ಸ್ವೀಕರಿಸಿ ಬ್ರಾಹ್ಮಣ ಸಮಾಜ ಮಾತ್ರವಲ್ಲದೆ ಸಮಸ್ತ ಹಿಂದೂ ಸಮಾಜಕ್ಕೆ ಒಳಿತಾಗುವಂತಾಗಲಿ ಎಂದು ಆಶೀರ್ವಚನ ನೀಡಿದರು. ಸೂಲಿಬೆಲೆ ಚಕ್ರವರ್ತಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಸಮಾಜವು,ಬ್ರಾಹ್ಮಣ ಸಮಾಜ ದಾರಿ ತಪ್ಪುವಂತಾಗಬಾರದು.ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯಾಯವರು 2 ವರ್ಷ ಪರ್ಯಾಯಾವಧಿಯಲ್ಲಿ ಶ್ರೀ ಕೃಷ್ಣ ದೇವರಿಗೆ ಮಾಡಿದ ಪ್ರಾರ್ಥನೆ ಹಾಗೂ ಸೇವೆಯಿಂದ ರಾಷ್ಟ್ರಕ್ಕೆ ಒಳಿತಾಗುವುದರ ಮೂಲಕ ಸಮಾಜದ ಸೇವೆ ಮಾಡಲು ಸ್ವಾಮೀಜಿಯವರಿಗೆ ಇನ್ನಷ್ಟು ಶಕ್ತಿ ಬರಲಿ ಎಂದು ನುಡಿದರು. ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರು ಸ್ವಾಗತಿಸಿ ಧನ್ಯವಾದ ನೀಡಿದರು.

 - ವಿಷ್ಣು ಸಹಸ್ರನಾಮ ಪಾರಾಯಣ
 - ವಿಷ್ಣು ಸಹಸ್ರನಾಮ ಪಾರಾಯಣ
 - ವಿಷ್ಣು ಸಹಸ್ರನಾಮ ಪಾರಾಯಣ
 - ವಿಷ್ಣು ಸಹಸ್ರನಾಮ ಪಾರಾಯಣ