"ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ"

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪಂಚಮ ಪರ್ಯಾಯದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಅಭಿಮಾನಿಗಳು ಸಮಾಜಸೇವಕರು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚೆನ್ನೈ ರಾಮಪ್ರಸಾದ್ ಇವರಿಗೆ "ಹರಿಗುರು ಸೇವಾ ಧುರಿಣಾ"ಪ್ರಶಸ್ತಿ,ಡಾ.ಜಿ.ಶಂಕರ್ ಇವರಿಗೆ "ಸಮಾಜರತ್ನ"ಪ್ರಶಸ್ತಿ,ಭುವನೇಂದ್ರ ಕಿದಿಯೂರು ಇವರಿಗೆ "ಶ್ರೀ ಕೃಷ್ಣ ಸೇವಾ ಧುರಿಣಾ"ಪ್ರಶಸ್ತಿ,ಕುಂಭಾಶಿ ಸೂರ್ಯನಾರಾಯಣ ಉಪಾಧ್ಯಾಯರಿಗೆ "ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ" ನೀಡಿ ಅನುಗ್ರಹಿಸಿದರು.ಹಾಗೂ ಪರ್ಯಾಯದ 2 ವರ್ಷಗಳಲ್ಲಿ ಸತತ ಸೇವೆ ಮಾಡಿದ ವಾಸುದೇವ ಭಟ್,ಶೃಂಗೇಶ್ವರ್,ರತ್ನ ಕುಮಾರ್,ಗಣೇಶ್ ರಾವ್ ಇವರಿಗೂ ಅನುಗ್ರಹ ಮಂತ್ರಾಕ್ಷತೆ ನೀಡಿದರು.

 -
 -
 -
 -
 -